Weekly Prediction — 21–10–2019
Weekly Prediction — 21–10–2019
ಮೇಷ
ರಾಶಿ : ಮೇಷ ರಾಶಿಯವರಿಗೆ ನಾಲ್ಕು ಐದನೇ ಮನೆಯಲ್ಲಿ ಸಂಚರಿಸುವ ಚಂದ್ರ ವಾರದ ಮೊದಲ
ನಾಲ್ಕೈದು ದಿನ ತೊಂದರೆಗಳನ್ನು ನೀಡುತ್ತಾನೆ. ನಿದ್ರಾಭಂಗ, ಸ್ಥಿರವಿಲ್ಲದ ನಿರ್ಧಾರಗಳು,
ಜೀರ್ಣ ಶಕ್ತಿಯಲ್ಲಿ ವ್ಯತ್ಯಾಸ, ವಾರದ ಮಧ್ಯದಲ್ಲಿ ಮಕ್ಕಳಲ್ಲಿ ಅನಾರೋಗ್ಯ,ಧನನಷ್ಟ,
ಗರ್ಭಪಾತದಂತಹ ತೊಂದರೆಗಳು, ಆದರೆ ವಾರದ ಕೊನೆಯಲ್ಲಿ ಚಂದ್ರ ಕುಜನೊಟ್ಟಿಗೆ ಸೇರಿ
ಶಶಿಮಂಗಳ ಯೋಗವಾಗುತ್ತದೆ. ಶತ್ರುಗಳ ನಿರ್ಮೂಲನೆಯಾಗುತ್ತದೆ.ಸೌಕರ್ಯ ಹೆಚ್ಚಾಗುತ್ತದೆ.
ಗೃಹದಲ್ಲಿ ಶಾಂತಿ ,ಸಪ್ತಮದಲ್ಲಿ ಸಂಚರಿಸುವ ಸೂರ್ಯ, ಬುಧ, ಶುಕ್ರರು ಕೂಡ ಅಶುಭವನ್ನೇ
ಸೂಚಿಸುವಾಗ ದಾಂಪತ್ಯದಲ್ಲಿ ವಿರಸ, ಪಾಲುದಾರಿಕೆಯಲ್ಲಿ ಸೋಲು, ಮೋಸ, ನಷ್ಟ, ಹಾಗೂ
ಪತ್ನಿಯ ಆರೋಗ್ಯದಲ್ಲಿ ತೊಂದರೆ ಸೂಚಿಸುತ್ತದೆ.ಅಷ್ಟಮದಲ್ಲಿ ಗುರು ಕೂಡ ಅನಾರೋಗ್ಯವನ್ನು
,ಸಂಕಟವನ್ನು ಸೂಚಿಸುತ್ತಾನೆ. ಗುರುವಿನ ಆರಾಧನೆ ಹಾಗೂ ಸುಬ್ರಹ್ಮಣ್ಯನ ಆರಾಧನೆ ಶುಭ
ತರುತ್ತದೆ.
ವೃಷಭ
ರಾಶಿ : ವೃಷಭ ರಾಶಿಯವರಿಗೆ ವಾರದ ಮೊದಲ ಮೂರು ದಿನ ಉತ್ತಮವಾಗಿರುತ್ತದೆ. ಅಂದುಕೊಂಡ
ಕೆಲಸಗಳು ಸುಗಮವಾಗಿ ನೆರವೇರುತ್ತವೆ. ಹೆಸರು, ಲಾಭ, ಉತ್ತಮ ಕೀರ್ತಿ, ಧೈರ್ಯ
ಪ್ರಾಪ್ತವಾಗುತ್ತವೆ. ಸಂಪರ್ಕ ಮತ್ತು ವೈಯಕ್ತಿಕವಾಗಿ ವಿಚಾರ ವಿನಿಮಯವನ್ನು
ಮಾಡಿಕೊಳ್ಳುವ ಸಮಯ ,ಆದರೆ ವಾರದ ಕೊನೆಯ ಐದು ದಿನ ತೊಂದರೆಗಳು ಕಾಡುತ್ತವೆ. ತಾಯಿಯ
ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಸವಾರರು ಜಾಗರೂಕರಾಗಿರುವುದು ಉತ್ತಮ, ಮಕ್ಕಳ
ವಿದ್ಯಾಭ್ಯಾಸಕ್ಕೆ ಅಡೆತಡೆ, ಹೊಟ್ಟೆಗೆ ಸಂಬಂಧಿಸಿದ ವ್ಯಾಧಿಗಳು,ಕುಜನು ಕೂಡ ಪಂಚಮದಲ್ಲಿ
ದ್ದು ಕಪಟತನವನ್ನು, ಬಂಧು ಬಳಗದವರಿಂದ ಕಲಹವನ್ನು, ಧನ ಚಿಂತೆಯನ್ನು, ಅಗೌರವ ಹಾಗೂ
ಅಪ್ರಾಮಾಣಿಕತನವನ್ನು ನೀಡಬಹುದು. ಕೆಂಪು ವಸ್ತ್ರವನ್ನು ದಾನ ಮಾಡುವುದು ಅಕ್ಕಿಯನ್ನು
ದಾನ ಮಾಡುವುದು ಉತ್ತಮ.
ಮಿಥುನ
ರಾಶಿ : ಮಿಥುನ ರಾಶಿಯವರಿಗೆ ವಾರದ ಮೊದಲೆರಡು ದಿನ ತೊಂದರೆಗಳನ್ನು, ಹೊಸ ಕಾರ್ಯಗಳಿಗೆ
ವಿಘ್ನ, ಹೆಚ್ಚು ಕೆಲಸ, ದೈಹಿಕವಾದ ಶ್ರಮ, ವಾಗ್ವಾದಗಳು, ಮಾನಸಿಕ ಅಸ್ವಸ್ಥತೆ,
ಸ್ತ್ರೀಯರಿಂದ ಶತ್ರುಗಳಿಂದ ಅಪಮಾನ. ವಾರ ಮಧ್ಯದಲ್ಲಿ ಸಿಂಹ ರಾಶಿಗೆ ಸಂಚರಿಸುವ ಚಂದ್ರನ
ಉತ್ತಮ ಕೀರ್ತಿಯನ್ನು, ಹೆಸರನ್ನು , ವಿಚಾರ ವಿನಿಮಯ ಮಾಡುವ ಸಾಮರ್ಥ್ಯವನ್ನು, ಹತ್ತಿರದ
ಫಲದಾಯಕ ಪ್ರಯಾಣಗಳನ್ನು ನೀಡುತ್ತಾನೆ. ವಾರದ ಕೊನೆಯಲ್ಲಿ ಚಂದ್ರ ಕುಜ ಇಬ್ಬರೂ ನಾಲ್ಕನೇ
ಮನೆಯಲ್ಲಿದ್ದು ನಿದ್ರಾ ಭಂಗವನ್ನು, ಸ್ಥಾನಪಲ್ಲಟವನ್ನು ಹಾಗೂ ವಾಹನಗಳಿಂದ ತೊಂದರೆಯನ್ನು
ಸೂಚಿಸುತ್ತಾನೆ. ಆದರೆ ಚತುರ್ಥದಲ್ಲಿ ರುವ ಕುಜನು ಕೂಡ ಸ್ಥಿರಾಸ್ತಿ ನಷ್ಟವನ್ನು,
ಸಂಬಂಧಿಕರ ಜೊತೆ ಶತ್ರುತ್ವವನ್ನು, ಕಲಹ ಮತ್ತು ಹೊಡೆದಾಟದ ಮನಸ್ಥಿತಿಯನ್ನು
ನೀಡುತ್ತಾನೆ. ವಾರಾಂತ್ಯದಲ್ಲಿ ಬೆಲ್ಲದ ಸಹಿತ ತೊಗರಿ ಬೇಳೆಯನ್ನು ದಾನ ಮಾಡುವುದು
ಉತ್ತಮ.
ಕರ್ಕಾಟಕ
ರಾಶಿ : ಕರ್ಕಾಟಕ ರಾಶಿ ಅಥವಾ ಲಗ್ನದವರಿಗೆ ರಾಶಿಯಲ್ಲಿ ಚಂದ್ರ ವಾರದ ಮೊದಲ ಮೂರು ದಿನ
ಶುಭ ಫಲಗಳನ್ನು ನಿರೀಕ್ಷಿಸಬಹುದು . ಅನುಕೂಲಗಳನ್ನು ನಿರೀಕ್ಷಿಸಬಹುದಾದ ಸಮಯ.
ಸ್ನೇಹಿತರನ್ನು ಸಂಧಿಸುವ ಅವಕಾಶಗಳಿರುತ್ತವೆ ಹಿರಿಯರ ಜೊತೆ ಉತ್ತಮ ಬಾಂಧವ್ಯ ಉನ್ನತ
ಅಂತಸ್ತು, ಉದ್ಯೋಗ ಬಡ್ತಿ ಪ್ರಾಪ್ತಿಯಾಗುತ್ತದೆ. ಒಟ್ಟಿನಲ್ಲಿ ಇದು ಭಾಗ್ಯೋದಯ ಸಮಯ
ಎಂದು ಹೇಳಬಹುದು. ಆದರೆ ವಾರದ ಮಧ್ಯದಲ್ಲಿ ದ್ವಿತೀಯಕ ಸಂಚರಿಸುವ ಚಂದ್ರ ಕುಟುಂಬದಲ್ಲಿ
ದುಃಖವನ್ನು, ಪ್ರಯೋಜನಕ್ಕೆ ಬಾರದ ಖರ್ಚುಗಳನ್ನು, ಕಾರಣಗಳಿಲ್ಲದೆ ಸಂಬಂಧಿಕರ ಜೊತೆ
ಶತ್ರುತ್ವವನ್ನು, ಪಾಪ ಕೃತ್ಯಗಳಲ್ಲಿ ಭಾಗಿಯಾಗುವ ಮನಸ್ಥಿತಿಯನ್ನು ನೀಡುತ್ತಾನೆ.
ಕುಟುಂಬದಲ್ಲಿ ಸೌಖ್ಯ ವಿರುವುದಿಲ್ಲ. ವಾರದ ಕೊನೆಯಲ್ಲಿ ಕುಜ ಮತ್ತು ಚಂದ್ರ ಇಬ್ಬರು
ತೃತೀಯದಲ್ಲಿ ಸಂಚರಿಸುತ್ತಿದ್ದು ಶುಭ ಫಲಗಳನ್ನು ನೀಡುತ್ತಾರೆ. ಸ್ಥಿರಾಸ್ತಿ
ಮಾರಾಟದಲ್ಲಿ ಲಾಭ, ಲೋಹ ಸಂಬಂಧ ,ವಸ್ತುಗಳ ಮಾರಾಟಗಾರರಿಗೆ ಉತ್ತಮ ಸಮಯ,
ಒಡಹುಟ್ಟಿದವರಿಂದ ಲಾಭ, ಉತ್ತಮ ಆರೋಗ್ಯ ವೃದ್ಧಿ, ಧೈರ್ಯ ಮತ್ತು ದೈಹಿಕ ಸಾಮರ್ಥ್ಯ
ವೃದ್ಧಿಯಾಗುತ್ತದೆ.
ಸಿಂಹರಾಶಿ
: ಸಿಂಹ ರಾಶಿಯವರಿಗೆ ವಾರದ ಮೊದಲ ಮೂರು ದಿನ ಅಶುಭ ಫಲಗಳು ದೊರೆಯುತ್ತವೆ.
ಸ್ತ್ರೀಯರಿಂದ ಅಧಿಕ ಖರ್ಚು, ಸಂಬಂಧಿಕರ ಜೊತೆ ಅದರಲ್ಲೂ ತಾಯಿ ಮತ್ತು ತಾಯಿಯ ಸಂಬಂಧಿಕರ
ಜೊತೆ ಕಲಹಗಳು. ಸಣ್ಣ ಸಣ್ಣ ವಿಷಯಗಳಿಗೆ ಬೇಡದ ವಿಷಯಗಳಿಗೆ ಹೆಚ್ಚು ಬೇಸರ ಪಡುವುದು
ಒಳ್ಳೆಯದಲ್ಲ. ಇನ್ನೂ ವಾರ ಮಧ್ಯದಲ್ಲಿ ರಾಶಿ ಅಥವಾ ಲಗ್ನಕ್ಕೆ ಪ್ರವೇಶಿಸುವ ಚಂದ್ರ ಶುಭ
ಫಲಗಳನ್ನು ನೀಡುತ್ತಾನೆ. ಸಾಕಷ್ಟು ಅನುಕೂಲಗಳು ದೊರೆಯುತ್ತವೆ. ಒಡವೆ ವಸ್ತುಗಳು
ಕಾಣಿಕೆಗಳು ಸುಗಂಧ ದ್ರವ್ಯಗಳನ್ನು ಕಾಣಿಕೆಯಾಗಿ ಪಡೆಯುವ ಅವಕಾಶಗಳಿರುತ್ತವೆ. ಸನ್ಮಾನ
ಸೌಕರ್ಯಗಳು ಹೆಚ್ಚಾಗುತ್ತವೆ. ಆದರೆ ವಾರದ ಕೊನೆಯಲ್ಲಿ ದ್ವಿತೀಯಕ್ಕೆ ಸಂಚರಿಸುವ ಚಂದ್ರ
ಕುಜ ಧನಾಗಮನ ನಿಧಾನವಾಗಬಹುದು. ನಾಲಿಗೆ ಬಿಗಿಯಿಲ್ಲದ ಮಾತುಗಳನ್ನಾಡಿ ತೊಂದರೆಗೆ ಸಿಲುಕಿ
ಕೊಳ್ಳುವಂತಹ ಪರಿಸ್ಥಿತಿ, ಕುಟುಂಬದಲ್ಲಿ ಕಲಹ, ಇತರರ ಮೇಲೆ ಅಸೂಯೆ, ಆಯುಧಗಳಿಂದ ಅಪಾಯ,
ಕೆಟ್ಟ ಕೋಪ, ನಿರಾಸೆ, ದೈಹಿಕ ಆರೋಗ್ಯ, ನಷ್ಟ, ಚರ್ಮ ಸಂಬಂಧಿ ತೊಂದರೆಗಳು
ಎದುರಾಗಬಹುದು. ವಿಷ್ಣುವಿನ ಆರಾಧನೆ ಹಾಗೂ ತಾಮ್ರವನ್ನು ದಾನ ಮಾಡುವುದು ಒಳ್ಳೆಯದು.
ಕನ್ಯಾ
ರಾಶಿ : ಕನ್ಯಾ ರಾಶಿಯವರಿಗೆ ವಾರದ ಮೊದಲ ಮೂರು ದಿನ ಏಕಾದಶದಲ್ಲಿ ಅಂದರೆ ಲಾಭ
ಸ್ಥಾನದಲ್ಲಿ ಸಂಚರಿಸುವ ಚಂದ್ರ ಶುಭ ಫಲಗಳನ್ನು ನೀಡುತ್ತಾನೆ. ಆದಾಯದಲ್ಲಿ
ಏರಿಕೆಯಾಗುತ್ತದೆ. ವಿಜ್ಞಾನದ ಜ್ಞಾನ ಗಳಿಸ ಬಯಸುವವರಿಗೆ ಉತ್ತಮ ಸಮಯ, ವಿವಾಹ
ಭಾಗ್ಯ,ಉತ್ತಮ ಸ್ನೇಹಿತರ ಭೇಟಿ, ದೀರ್ಘ ವ್ಯಾಧಿಗಳಿಂದ ಮುಕ್ತಿ ದೊರೆಯುತ್ತದೆ. ಇನ್ನು
ದ್ವಾದಶದಲ್ಲಿ ಸಂಚರಿಸುವ ಚಂದ್ರ ವಾರ ಮಧ್ಯದಲ್ಲಿ ತೊಂದರೆಗಳನ್ನು ನೀಡುತ್ತಾನೆ.
ಸ್ತ್ರೀಯರಿಂದ ಅಧಿಕ ಖರ್ಚು, ಮಾನಸಿಕವಾಗಿ ಆಯಾಸ ಪಡುವಂತಹ ಸಮಯ ಇದು. ಆದರೆ ವಾರದ
ಕೊನೆಯಲ್ಲಿ ರಾಶಿ ಅಥವಾ ಲಗ್ನಕ್ಕೆ ಸಂಚರಿಸುವ ಚಂದ್ರ ಶುಭ ಫಲಗಳನ್ನು ನೀಡುತ್ತಿತ್ತು
ಅನುಕೂಲಗಳನ್ನು ಪಡೆಯಬಹುದು. ಉನ್ನತ ಅಂತಸ್ತು ಬಡ್ತಿ ಪ್ರಾಪ್ತಿಯಾಗುವ ಸಮಯ. ಆದರೂ
ಚಂದ್ರನೊಟ್ಟಿಗೆ ಲಗ್ನದಲ್ಲಿ ಇರುವಂಥ ಕುಜ ಶೀಘ್ರವಾದ ಕೋಪವನ್ನು, ದುಡುಕು
ಸ್ವಭಾವವನ್ನು,ಕ್ರೂರತ್ವವನ್ನು ನೀಡಬಹುದು. ಅನಾಗರಿಕರು ಅಪರಾಧಿಗಳಿಂದ
ತೊಂದರೆಯಾಗಬಹುದು. ಸುಳ್ಳು ದೋಷಾರೋಪಣೆಗಳು ಎದುರಾಗಬಹುದು. ಜನ್ಮ ಚಂದ್ರನ ಮೇಲೆ ಅಂದರೆ
ನಿಮ್ಮ ರಾಶಿಯ ಮೇಲೆ ಕುಜ ಬಂದಾಗ ಸ್ತ್ರೀಯರಿಗೆ ಮಾಸಿಕ ಋುತುಚಕ್ರದಲ್ಲಿ ತೊಂದರೆ
ಆಗಬಹುದು. ಶಕ್ತಿಗಳ ಭಯ ಹೆಚ್ಚಾಗಿರುತ್ತದೆ.ಸುಬ್ರಹ್ಮಣ್ಯ ಮತ್ತು ಈಶ್ವರನ ಆರಾಧನೆ
ಮಾಡುವುದು ಒಳ್ಳೆಯದು .
ತುಲಾ
ರಾಶಿ : ತುಲಾ ರಾಶಿಯವರಿಗೆ ದಶಮದಲ್ಲಿ ಏಕಾದಶದಲ್ಲಿ ಸಂಚರಿಸುವ ಚಂದ್ರ ವಾರದ ಮೊದಲ
ನಾಲ್ಕೈದು ದಿನ ಶುಭವನ್ನು ಸೂಚಿಸುತ್ತಾನೆ. ಗೌರವ, ಉಲ್ಲಾಸ, ಸಂತೋಷ, ಧೈರ್ಯ,
ಉತ್ಸಾಹಗಳನ್ನು ಪಡೆದು ಉತ್ತಮ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಸಮಯ.
ಬಹುಮಾನಗಳನ್ನು ಪಡೆಯುವ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ, ಸ್ವತ್ತನ್ನು ಉತ್ತಮ ಬೆಲೆಗೆ
ಮಾರಾಟ ಮಾಡುವ ಅವಕಾಶ, ಉದ್ಯೋಗಾಕಾಂಕ್ಷಿಗಳು ಒಳ್ಳೆಯ ಉದ್ಯೋಗ ಪಡೆಯಬಹುದು.
ಫಲಪ್ರದವಾಗುವ ಯಾತ್ರೆಗಳು, ಮದ್ಯ ದ್ರವ್ಯ ವ್ಯಾಪಾರದಿಂದ ಉತ್ತಮ ಆದಾಯ, ಪ್ರಣಯಿಗಳಿಗೆ
ಇದು ಉತ್ತಮ ಸಮಯ. ಆದರೆ ವಾರಾಂತ್ಯದಲ್ಲಿ ಚಂದ್ರ ಕುಜ ಇಬ್ಬರೂ ದ್ವಾದಶದಲ್ಲಿ ಸಂಚಾರ
ಮಾಡುತ್ತಿದ್ದು ಮಾನಸಿಕವಾದ ಆಯಾಸ, ತಿರುಗಾಟ, ಮೂಳೆಗಳಿಗೆ ತೊಂದರೆಯಾಗಬಹುದು.
ರಕ್ತದೊತ್ತಡ ಹೆಚ್ಚಾಗಬಹುದು. ಸಂಬಂಧಿಕರ ಜೊತೆ ಶತ್ರುತ್ವ, ಅಗೌರವ ಮತ್ತು ನಷ್ಟ.
ಹೊಸದಾಗಿ ಯಾವುದೇ ಕೆಲಸಗಳನ್ನು ಪ್ರಾರಂಭಿಸಿರುವುದು ಒಳ್ಳೆಯದು. ಮಾನಸಿಕ ಚಿಂತೆ
ಹೆಚ್ಚಾಗುತ್ತದೆ. ಆದರೆ ನಿಮ್ಮ ಜನ್ಮ ಕುಜನ ಮೇಲೆ ಗೋಚಾರದ ಕುಜ ಸಂಚಾರ
ಮಾಡುತ್ತಿದ್ದಲ್ಲಿ ಧನ ಸಂಗ್ರಹ ಮತ್ತು ಸ್ಥಿರಾಸ್ತಿ ನಷ್ಟ ಸಂಭವ ಇರುತ್ತದೆ.
ವಾರಾಂತ್ಯದಲ್ಲಿ ತೊಗರಿಯನ್ನು ದಾನ ಮಾಡುವುದು ಅಕ್ಕಿ ದಾನ ಮಾಡುವುದು ಒಳ್ಳೆಯದು.
ವೃಶ್ಚಿಕ
ರಾಶಿ : ವೃಶ್ಚಿಕ ರಾಶಿಯವರಿಗೆ ಈ ವಾರ ಚಂದ್ರ ಒಂಬತ್ತು ಹತ್ತು ಹನ್ನೊಂದನೆ ಮನೆಗಳಲ್ಲಿ
ಸಂಚಾರ ಮಾಡುತ್ತಾನೆ. ವಾರದ ಮೊದಲ ಮೂರು ದಿನ ತೊಂದರೆಗಳನ್ನು ಸೂಚಿಸುತ್ತಾನೆ. ತಂದೆಯ
ಆರೋಗ್ಯದ ಕಡೆ ಗಮನ ವಹಿಸುವುದು ಅವಶ್ಯಕ, ಅನಾವಶ್ಯಕ ಖರ್ಚುಗಳಾಗುತ್ತದೆ. ಪ್ರಯಾಣಗಳಲ್ಲಿ
ಜೊತೆಗಾರ ಇಲ್ಲದೆ ಬೇಸರ, ಆಯಾಸ ಆಗುತ್ತದೆ. ಧರ್ಮ ಕಾರ್ಯಗಳಿಗೆ ಅಡೆತಡೆಗಳು,ಮಕ್ಕಳ
ಜೊತೆ ವಿವಾದ, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಆಗಬಹುದು. ಇನ್ನು ವಾರದ ಮಧ್ಯದಲ್ಲಿ
ದಶಮಕೆ ಪ್ರವೇಶಿಸುವ ಚಂದ್ರ ಉದ್ಯೋಗದಲ್ಲಿ ಉನ್ನತಿಯನ್ನು ಸೂಚಿಸುತ್ತಾನೆ. ಅಧಿಕಾರ
ಪಡೆಯುವ ಅವಕಾಶಗಳು ಇರುತ್ತವೆ. ಮನಸ್ಸಿನ ಆಸೆಗಳನ್ನು ಪೂರೈಸಿಕೊಳ್ಳುವ ಅವಕಾಶಗಳು
ಇರುತ್ತವೆ. ಇನ್ನು ಏಕಾದಶದಲ್ಲಿ ಕುಜ ಚಂದ್ರರ ಸಂಯೋಗ ಇಬ್ಬರೂ ಶುಭ ಫಲಗಳನ್ನೇ
ಸೂಚಿಸುತ್ತಿದ್ದು ವಿವಾಹ, ಪುತ್ರ ಸಂತಾನ, ಭೂಮಿ ವ್ಯಾಪಾರದಿಂದ ಲಾಭ, ವೈಭವ ಮತ್ತು
ಮೇಜುಗಳನ್ನು ಅನುಭವಿಸುವ ಸಮಯ, ಕೈಗೊಂಡ ಕಾರ್ಯಗಳಲ್ಲಿ ಜಯ, ಲಾಭ, ಸಹೋದರ ಸಹೋದರಿಯರಿಂದ
ಲಾಭ. ವಾರದ ಮೊದಲ ಮೂರು ದಿನ ಅಕ್ಕಿಯನ್ನು ದಾನ ಮಾಡುವುದು ಒಳ್ಳೆಯದು.
ಧನಸ್ಸು
ರಾಶಿ : ಈ ವಾರ ಧನು ರಾಶಿಯವರಿಗೆ ಅಂಥ ಒಳ್ಳೆಯ ಫಲಗಳನ್ನು ದೊರೆಯಲಾರವು. ವಾರದ ಮೊದಲ
ಮೂರು ದಿನ ಅಷ್ಟಮದಲ್ಲಿ ಸಂಚರಿಸುವ ಚಂದ್ರ ಸೆರೆವಾಸದ ಭಯವನ್ನು ಕಳ್ಳತನ ಮತ್ತು ಇತರ
ಆಪಾದನೆಗಳು ಬರುವ ಸಾಧ್ಯತೆಗಳು ಇರುತ್ತವೆ. ಕ್ರೂರವಾಗಿ ವರ್ತಿಸುತ್ತೀರಿ. ಕೋಪ ಮತ್ತು
ಕೆಲಸದ ಮನಸ್ಥಿತಿ ಹೊಂದಿರುತ್ತೀರಿ. ಇನ್ನೂ ವಾರ ಮಧ್ಯದಲ್ಲಿ ನವಮಕ್ಕೆ ಸಂಚರಿಸುವ ಚಂದ್ರ
ಕೂಡ ಎದೆನೋವು, ಮೆದುಳಿಗೆ ಸಂಬಂಧಿಸಿದ ತೊಂದರೆಗಳನ್ನು ನೀಡಬಹುದು. ವಾರಾಂತ್ಯದಲ್ಲಿ
ದಶಮದಲ್ಲಿ ಸಂಚರಿಸುವ ಚಂದ್ರನು ಉದ್ಯೋಗದಲ್ಲಿ ಉನ್ನತಿಯನ್ನು ನೀಡುತ್ತಾನಾದರೂ ದಶಮದಲ್ಲಿ
ಇರುವ ಕುಜ ತಮ್ಮ ಆಸೆಗಳನ್ನು ಕಾನೂನು ರೀತಿ ಅಥವಾ ಕಾನೂನಿಗೆ ವಿರುದ್ಧವಾಗಿ ತಮ್ಮ
ಕೆಲಸಗಳನ್ನು ಈಡೇರಿಸಿಕೊಳ್ಳುತ್ತಾರೆ. ಕೈಗೊಳ್ಳುವ ಎಲ್ಲ ಕೆಲಸಗಳಲ್ಲಿ ಸೋಲು,
ಶತ್ರುತ್ವ, ವೃತ್ತಿಯಲ್ಲಿ ಆತಂಕವನ್ನು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ
ವೃತ್ತಿಗಾಗಿ ಅಲೆದಾಟ, ಸಹವಾಸ ದೋಷದಿಂದ ಕೆಟ್ಟ ಪರಿಸ್ಥಿತಿ, ಇತರರಿಂದ ಮೋಸಕ್ಕೆ
ಒಳಗಾಗುತ್ತಾರೆ. ಹಾಗಾಗಿ ಈ ವಾರ ಅಕ್ಕಿಯನ್ನು ಮತ್ತು ತೊಗರಿ ಬೇಳೆ ದಾನ ಮಾಡುವುದು.
ಸುಬ್ರಹ್ಮಣ್ಯನ ಆರಾಧನೆ ಮಾಡುವುದು ಒಳ್ಳೆಯದು.
ಮಕರ
ರಾಶಿ : ಮಕರ ರಾಶಿಯವರಿಗೆ ಈ ವಾರದ ಮೊದಲ ಮೂರು ದಿನ ಶುಭ ಫಲಗಳನ್ನು ನಿರೀಕ್ಷಿಸಬಹುದು.
ಏಳರಲ್ಲಿ ಸಂಚರಿಸುವ ಚಂದ್ರ ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ, ಹಿರಿಯರಿಂದ
ಆಶೀರ್ವಾದವನ್ನು, ಸರ್ಕಾರದ ಜತೆಗಿನ ವ್ಯವಹಾರದಿಂದ ಲಾಭ, ವಾಣಿಜ್ಯ ವ್ಯಾಪಾರಗಳಿಂದ ಲಾಭ,
ಹತ್ತಿರದ ಫಲದಾಯಕ ಪ್ರಯಾಣಗಳನ್ನು ಮಾಡುತ್ತೀರಿ. ನಿಮ್ಮ ಜೀವನ ಸಂಗಾತಿಯಿಂದ ಶುಭ
ಸಮಾಚಾರವನ್ನು ಕೇಳುವ ಅವಕಾಶಗಳು, ಧನ ಸಂಗ್ರಹವಾಗುತ್ತದೆ. ಆದರೆ ವಾರದ ಕೊನೆಯ ಮೂರು ದಿನ
ಅಷ್ಟಮದಲ್ಲಿ ನವಮದಲ್ಲಿ ಸಂಚರಿಸುವ ಚಂದ್ರ ಅಶುಭ ಫಲಗಳನ್ನು ನೀಡುತ್ತಾನೆ. ಪತ್ನಿಯ
ಜೊತೆ ವಾದ ವಿವಾದಗಳು, ಆತಂಕ ಹೆಚ್ಚಾಗುತ್ತದೆ. ಆಕಸ್ಮಿಕವಾದ ವಿಪತ್ತುಗಳು, ಮಕ್ಕಳ ಜೊತೆ
ವಿವಾದಗಳ ಗಬಹುದು. ಹೃದಯ ಸಂಬಂಧಿ ತೊಂದರೆಗಳು, ತಂದೆಯ ಆರೋಗ್ಯದಲ್ಲಿ
ವ್ಯತ್ಯಾಸಗಳಾಗಬಹುದು. ಪ್ರಯಾಣದಲ್ಲಿ ಜೊತೆಗಿಲ್ಲದ ಬೇಸರವಾಗಬಹುದು. ನವಮದಲ್ಲಿ
ಚಂದ್ರನೊಟ್ಟಿಗೆ ಇರುವ ಕುಜ ಕೂಡ ತೊಂದರೆಗಳನ್ನು ಸೂಚಿಸುತ್ತಾನೆ. ನೀವು ಹೆಚ್ಚು ಬಲ
ಹೀನರಾಗುತ್ತಾರೆ. ಇತರರ ಜೊತೆ ಅಸೂಯೆ, ಶತ್ರುತ್ವದ ಹೆಚ್ಚಾಗುತ್ತವೆ. ಅನವಶ್ಯಕವಾಗಿ
ವರ್ಗಾವಣೆಯಾಗಬಹುದು. ವಾರದ ಕೊನೆಯ ನಾಲ್ಕು ದಿನ ಬೆಳ್ಳಿಯನ್ನು ದಾನ ಮಾಡುವುದು
ತಾಮ್ರವನ್ನು ದಾನ ಮಾಡುವುದು ಒಳ್ಳೆಯದು.
ಕುಂಭ
ರಾಶಿ : ಕುಂಭ ರಾಶಿಯವರಿಗೆ ಆರು ಏಳು ಎಂಟನೇ ಮನೆಗಳಲ್ಲಿ ಸಂಚರಿಸುವ ಚಂದ್ರ ವಾರದ ಮೊದಲ
ಐದಾರು ದಿನ ಶುಭ ಫಲಗಳನ್ನು ನೀಡುತ್ತಾನೆ. ಶತ್ರುಗಳ ನಿರ್ಮೂಲನೆಯಾಗುತ್ತದೆ. ಧನಸಂಗ್ರಹ
ಒಳ್ಳೆಯ ಭವಿಷ್ಯಕ್ಕೆ ಬೇಕಾದ ಅನುಕೂಲಗಳು ದೊರೆಯುತ್ತವೆ. ಅಂತಸ್ತು ದೊರೆಯುತ್ತದೆ.
ಗೃಹದಲ್ಲಿ ಶಾಂತಿ, ನಂತರ ಗೌರವ ಸನ್ಮಾನಗಳು ದೊರೆಯುತ್ತಿವೆ. ಸೌಕರ್ಯಗಳು
ಹೆಚ್ಚಾಗುತ್ತವೆ. ಉತ್ತಮವಾದ ಆಹಾರ, ನಿದ್ರೆ ಗಳು ಸಿಗುತ್ತವೆ. ವಾರದ ಕೊನೆಯಲ್ಲಿ ಕುಜ
ಚಂದ್ರ ಇಬ್ಬರೂ ಅಷ್ಟಮದಲ್ಲಿ ದ್ದು ತೊಂದರೆಗಳನ್ನು ಸೂಚಿಸುತ್ತಾರೆ. ಅಪಘಾತಗಳಾಗುವ
ಅವಕಾಶಗಳಿರುತ್ತವೆ. ಗಾಯಗಳಾಗುತ್ತವೆ, ಮೂಳೆಗೆ ಸಂಬಂಧಿಸದ ಸಂಧಿ ನೋವು ಗಳಾಗಬಹುದು.
ರಕ್ತಹೀನತೆ ಹೆಚ್ಚಾಗುತ್ತದೆ. ಆಯಾಸ ಹೆಚ್ಚಾಗುತ್ತದೆ. ಕೈಗೊಂಡ ಎಲ್ಲಾ ಕಾರ್ಯಗಳಲ್ಲೂ
ಸೋಲನ್ನು ಕಾಣುವಂಥ ಸಮಯ ಇದಾಗಿರುತ್ತದೆ. ಇದರಿಂದ ಹೊರಗೆ ಬರಲು ವಾರದ ಅಂತ್ಯದಲ್ಲಿ
ಅಕ್ಕಿಯನ್ನು ತೊಗರಿ ಬೇಳೆಯನ್ನು ದಾನ ಮಾಡುವುದು ಉತ್ತಮ.
ಮೀನ
ರಾಶಿ : ಮೀನ ರಾಶಿಯಲ್ಲಿ ಹುಟ್ಟಿದವರಿಗೆ ವಾರದ ಮೊದಲ ಮೂರು ದಿನ ಪಂಚಮದಲ್ಲಿ ಸಂಚರಿಸುವ
ಚಂದ್ರ ತೊಂದರೆಗಳನ್ನು ನೀಡುತ್ತಾನೆ. ಗರ್ಭಪಾತದಂತಹ ತೊಂದರೆಗಳು ಕಾಣಬಹುದು. ಮಕ್ಕಳ
ಪ್ರಯತ್ನಗಳಲ್ಲಿ ಸೋಲಾಗುತ್ತದೆ. ಅಪಮಾನ ಮತ್ತು ಅವಮಾನ ಪಡುವುದು ಅಂತಸ್ತು
ನಷ್ಟವಾಗುತ್ತದೆ. ಮಾನಸಿಕವಾದ ಅಸಮತೋಲನ ವಿಚಾರ ಘಟ್ಟ ವ್ಯಾಪಾರ ವ್ಯವಹಾರದಿಂದ
ತೊಂದರೆಗಳು ಆಗಬಹುದು. ವ್ಯರ್ಥವಾದ ಖರ್ಚುಗಳು ಹೆಚ್ಚಾಗುತ್ತವೆ. ಆದರೆ ಜನ್ಮರಾಶಿಯಿಂದ
6ನೇ ಮನೆಗೆ ಸಂಚರಿಸುವ ಚಂದ್ರ ವಾರ ಮಧ್ಯದಲ್ಲಿ ಅನುಕೂಲಗಳನ್ನು ಸೂಚಿಸುತ್ತಾನೆ.
ಶತ್ರುಗಳ ನಿರ್ಮೂಲನೆಯಾಗುತ್ತದೆ. ಶಾಂತಿಯುತ ಗೃಹ ಜೀವನ ನಿಮ್ಮದಾಗುತ್ತದೆ. ಸರ್ಕಾರದ
ಜತೆಗಿನ ವ್ಯವಹಾರದಿಂದ ಲಾಭವಾಗುತ್ತದೆ. ವಾಣಿಜ್ಯ ವ್ಯಾಪಾರಿಗಳಿಂದ ಲಾಭ, ಹತ್ತಿರದ
ಫಲದಾಯಕ ಪ್ರಯಾಣಗಳು, ಪತ್ನಿಯಿಂದ ಧನ ಸಂಗ್ರಹವಾಗುತ್ತದೆ. ವಾರದ ಮೊದಲೆರಡು ದಿನ ಈಶ್ವರನ
ಆರಾಧನೆ ಸುಬ್ರಹ್ಮಣ್ಯನ ಆರಾಧನೆ ಶುಭ ತರುತ್ತದೆ.
Nice Post!!
ReplyDelete