Weekly Prediction — 21–10–2019
Weekly Prediction — 21–10–2019 ಮೇಷ ರಾಶಿ : ಮೇಷ ರಾಶಿಯವರಿಗೆ ನಾಲ್ಕು ಐದನೇ ಮನೆಯಲ್ಲಿ ಸಂಚರಿಸುವ ಚಂದ್ರ ವಾರದ ಮೊದಲ ನಾಲ್ಕೈದು ದಿನ ತೊಂದರೆಗಳನ್ನು ನೀಡುತ್ತಾನೆ. ನಿದ್ರಾಭಂಗ, ಸ್ಥಿರವಿಲ್ಲದ ನಿರ್ಧಾರಗಳು, ಜೀರ್ಣ ಶಕ್ತಿಯಲ್ಲಿ ವ್ಯತ್ಯಾಸ, ವಾರದ ಮಧ್ಯದಲ್ಲಿ ಮಕ್ಕಳಲ್ಲಿ ಅನಾರೋಗ್ಯ,ಧನನಷ್ಟ, ಗರ್ಭಪಾತದಂತಹ ತೊಂದರೆಗಳು, ಆದರೆ ವಾರದ ಕೊನೆಯಲ್ಲಿ ಚಂದ್ರ ಕುಜನೊಟ್ಟಿಗೆ ಸೇರಿ ಶಶಿಮಂಗಳ ಯೋಗವಾಗುತ್ತದೆ. ಶತ್ರುಗಳ ನಿರ್ಮೂಲನೆಯಾಗುತ್ತದೆ.ಸೌಕರ್ಯ ಹೆಚ್ಚಾಗುತ್ತದೆ. ಗೃಹದಲ್ಲಿ ಶಾಂತಿ ,ಸಪ್ತಮದಲ್ಲಿ ಸಂಚರಿಸುವ ಸೂರ್ಯ, ಬುಧ, ಶುಕ್ರರು ಕೂಡ ಅಶುಭವನ್ನೇ ಸೂಚಿಸುವಾಗ ದಾಂಪತ್ಯದಲ್ಲಿ ವಿರಸ, ಪಾಲುದಾರಿಕೆಯಲ್ಲಿ ಸೋಲು, ಮೋಸ, ನಷ್ಟ, ಹಾಗೂ ಪತ್ನಿಯ ಆರೋಗ್ಯದಲ್ಲಿ ತೊಂದರೆ ಸೂಚಿಸುತ್ತದೆ.ಅಷ್ಟಮದಲ್ಲಿ ಗುರು ಕೂಡ ಅನಾರೋಗ್ಯವನ್ನು ,ಸಂಕಟವನ್ನು ಸೂಚಿಸುತ್ತಾನೆ. ಗುರುವಿನ ಆರಾಧನೆ ಹಾಗೂ ಸುಬ್ರಹ್ಮಣ್ಯನ ಆರಾಧನೆ ಶುಭ ತರುತ್ತದೆ. ವೃಷಭ ರಾಶಿ : ವೃಷಭ ರಾಶಿಯವರಿಗೆ ವಾರದ ಮೊದಲ ಮೂರು ದಿನ ಉತ್ತಮವಾಗಿರುತ್ತದೆ. ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರುತ್ತವೆ. ಹೆಸರು, ಲಾಭ, ಉತ್ತಮ ಕೀರ್ತಿ, ಧೈರ್ಯ ಪ್ರಾಪ್ತವಾಗುತ್ತವೆ. ಸಂಪರ್ಕ ಮತ್ತು ವೈಯಕ್ತಿಕವಾಗಿ ವಿಚಾರ ವಿನಿಮಯವನ್ನು ಮಾಡಿಕೊಳ್ಳುವ ಸಮಯ ,ಆದರೆ ವಾರದ ಕೊನೆಯ ಐದು ದಿನ ತೊಂದರೆಗಳು ಕಾಡುತ್ತವೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಸವಾರರು ಜಾಗರೂಕರ...